ಕಾನ್ಸ್ಟೇಬಲ್ ದೆಬಾಶಿಶ್ ಸೇಥಿರವರು ಒಡಿಶಾ ಪೋಲಿಸ್‌ನ ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್ಒಜಿ) ಭಾರತೀಯ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು. ಅವರಿಗೆ ಮರಣೋತ್ತರವಾಗಿ ಭಾರತದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು ನೀಡಲಾಯಿತು. == ವೃತ್ತಿಜೀವನ == ದೇಬಾಶಿಶ್ ಸೇಥಿ ಅವರು ಒಡಿಸ್ಸಾದ ಅಂಗುಲ್ ಜಿಲ್ಲೆಯವರು. ಅವರು ೨೦೧೬ ರಲ್ಲಿ ಎಸ್. ಓ. ಜಿ. ಗೆ ಸೇರುವ ಮೊದಲು ಒಡಿಶಾ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ೨೦೨೦ ರ ಸೆಪ್ಟೆಂಬರ್ ೯ ರಂದು, ಮಾವೋವಾದಿ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಎಡಪಂಥೀಯ ಉಗ್ರಗಾಮಿ ಗುಂಪಿನ ಸದಸ್ಯರೊಂದಿಗೆ ಹೋರಾಡುತ್ತಿದ್ದಾಗ, ಕಾಲಹಂಡಿ ಜಿಲ್ಲೆಯ ಸಿರ್ಕಿ ಗ್ರಾಮದ ಬಳಿಯ ಆಳವಾದ ಕಾಡಿನಲ್ಲಿ ಈ ಕಮಾಂಡೋ ಹತರಾದರು. ಈ ಕಾರ್ಯಾಚರಣೆಯ ಪರಿಣಾಮವಾಗಿ ಐವರು ಭಯೋತ್ಪಾದಕರು ಹತರಾದರು. == ಶೌರ್ಯ ಚಕ್ರ == ದೆಬಾಶಿಶ್ ಸೇಥಿಯವರಿಗೆ ಭಾರತದ ರಾಷ್ಟ್ರಪತಿಯವರು ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದರು. ಈ ಪ್ರಶಸ್ತಿಯನ್ನು ದೆಬಾಶಿಶ್ ಸೇಥಿಯವರ ಶೌರ್ಯ ಮತ್ತು ತ್ಯಾಗವನ್ನು ಗುರುತಿಸಿ ಅಂಗುಲ್ ಎಸ್ಪಿ ಜಗನ್‌ಮೋಹನ್ ಮೀನಾ ಅವರು ಆಗಸ್ಟ್ ೧೫ , ೨೦೨೧ ರಂದು ಅವರ ಕುಟುಂಬಕ್ಕೆ ನೀಡಿದರು. == ಉಲ್ಲೇಖಗಳು ==